ಬೆಂಗಳೂರು: ನೀವು ಕೊಳಲು ವಾದನದಲ್ಲಿ ಪರಿಣತರೇ? ಹಲವು ವರ್ಷಗಳಿಂದ ಫ್ಲ್ಯೂಟ್ ನುಡಿಸುವುದರಲ್ಲಿ ಅನುಭವ ಇದೆಯೇ? ಹಾಗಾದರೆ, ನಿಮಗಿಲ್ಲಿ ಸಿಹಿ ಸುದ್ದಿ ಕಾದಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನ ಸಂಸ್ಥೆಯಾದ ಕಲಾಕ್ಷೇತ್ರ ಫೌಂಡೇಷನ್ ನಲ್ಲಿ ಮೂರು ಹುದ್ದೆಗಳು ಖಾಲಿ ಇದ್ದು, ಸಂಸ್ಥೆಯಿಂದ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ, ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಚೆನ್ನೈನಲ್ಲಿರುವ ಕಲಾಕ್ಷೇತ್ರ ಫೌಂಡೇಷನ್ ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಮಾರ್ಚ್ 15ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎರಡು ಟ್ಯೂಟರ್ (ಸಂಗೀತ) ಹುದ್ದೆಗಳು ಹಾಗೂ ಒಂದು ಹಾಸ್ಟೆಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು ಏನು? ವೇತನ ಎಷ್ಟು?
ವೋಕಲ್/ಫ್ಲ್ಯೂಟ್ ಸಂಗೀತದಲ್ಲಿ ಅನುಭವ ಇರುವವರು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಟ್ಯೂಟರ್ ಗಳಿಗೆ 58,560 ರೂ.ವರೆಗೆ ವೇತನ ನೀಡಲಾಗುತ್ತದೆ. ಇನ್ನು ಹಾಸ್ಟೆಲ್ ಸೂಪರಿಂಟೆಂಡೆಂಟ್ ಆದವರಿಗೆ ಮಾಸಿಕ 52,170 ರೂ.ವರೆಗೆ ವೇತನ ನೀಡಲಾಗುತ್ತದೆ.
ಹಾಸ್ಟೆಲ್ ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಪದವಿ ಜತೆಗೆ ಬಿ.ಎಡ್ ಶಿಕ್ಷಣ ಪಡೆದವರಾಗಿರಬೇಕು ಎಂದು ಕಲಾಕ್ಷೇತ್ರ ಫೌಂಡೇಷನ್ ತಿಳಿಸಿದೆ. ವಸತಿ ಗೃಹದ ಮೇಲ್ವಿಚಾರಕರಾಗಿ ಸೂಪರಿಂಟೆಂಡೆಂಟ್ ಕಾರ್ಯನಿರ್ವಹಿಸಲಿದ್ದಾರೆ. ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗೆ, ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕಲಾಕ್ಷೇತ್ರ ಫೌಂಡೇಷನ್ ನ www.kalakshetra.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.