ಜೂನಿಯರ್ ಎನ್ ಟಿಆರ್ ಅಭಿಮಾನಿಗಳ ಪಾಲಿಗಿಂದು ನಿಜಕ್ಕೂ ದೀಪಾವಳಿಯೇ ಸರಿ. 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎನ್ ಟಿಆರ್ ಗೆ ವಾರ್ 2 ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ.
ಬಾಲಿವುಡ್ ನ ಬಹುನಿರೀಕ್ಷಿತ ವಾರ್ 2 ಸಿನಿಮಾದ ಮೊದಲ ಗ್ಲಿಮ್ಸ್ ನ್ನು ಇಂದು ರಿಲೀಸ್ ಮಾಡಲಾಗಿದೆ. ಹೈವೋಲ್ಟೇಜ್ ಆಕ್ಷನ್ ಮೂವಿಯಲ್ಲಿ ಈ ಬಾರಿ ಹೃತಿಕ್ ರೋಷನ್ ಗೆ ಎನ್ ಟಿಆರ್ ಟಕ್ಕರ್ ನೀಡುತ್ತಿದ್ದಾರೆ. ಮೊದಲ ನೋಟದಲ್ಲಿ ಇದೊಂದು ಕಂಪ್ಲೀಟ್ ಆಕ್ಷನ್ ಸಿನಿಮಾ ಅನ್ನುವುದನ್ನು ನಿರ್ದೇಶಕರು ಸಾಬೀತು ಮಾಡಿದ್ದಾರೆ.
ಆಗಸ್ಟ್ 14ರಂದು ಹಿಂದಿ, ತೆಲುಗು, ತಮಿಳಿನಲ್ಲಿ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇನ್ನು ಸಿನಿಮಾದಲ್ಲಿ ಕಿಯಾರ ಅಡ್ವಾಣಿ ಸಖತ್ ಹಾಟ್ ಆಗಿ ಮಿಂಚುವ ಮೂಲಕ ಸಿನಿ ರಸಿಕರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಹೃತಿಕ್ ಮತ್ತು ಎನ್ ಆರ್ ನಡುವೆ ಮೆಗಾ ಆಕ್ಷನ್ ಸನ್ನಿವೇಷಗಳಿದ್ದು, ಗ್ಲಿಮ್ಸ್ ನಲ್ಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಅಯಾನ್ ಮುಖರ್ಜಿ ನಿರ್ದೇಶಿಸಿರುವ ಸಿನಿಮಾವನ್ನು ಯಶ್ ರಾಜ್ ಸಿನಿಮಾಸ್ ನಿರ್ಮಿಸಿದೆ.