ಚಿಕ್ಕಬಳ್ಳಾಪುರ: ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಪಾಕಿಗಳ ಗುಂಡಿಗೆ ಬಲಿಯಾಗಿದ್ದ ವೀರ ಯೋಧನೆಗೆ ಜನರು ಅಂತಿಮ ನಮನ ಜಿಲ್ಲೆಯ ಜನ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಗಳ ಗುಂಡಿಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕಲ್ಲಿತಾಂಡ ನಿವಾಸಿ ಮುರುಳಿ ನಾಯಕ್ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ರಾಜ್ಯದ ಜನರು ಹೂಮಳೈ ಸುರಿದಿದ್ದಾರೆ.

ಹುತಾತ್ಮ ಯೋಧನಿಗೆ ಕಂಬನಿ ಮಿಡಿದ ಚಿಕ್ಕಬಳ್ಳಾಪುರದ ಜನರು ದಾರಿ ಮಧ್ಯೆ ಹೂಮಳೈ ಸುರಿದಿದ್ದಾರೆ. ಮಳೆಯನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಮೃತ ಯೋಧನ ಅಂತಿಮ ದರ್ಶನವನ್ನು ಪಡೆದಿದ್ದಾರೆ.
ಏರ್ ಪೋರ್ಟ್ ನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಹುತಾತ್ಮ ಯೋಧನ ಅಂತಿಮ ಸಂಸ್ಕಾರ ಪಡೆಯಲು ಚಿಕ್ಕಬಳ್ಳಾಪುರ ಜನರು ಮುಗಿ ಬಿದ್ದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಷ್ಪ ನಮನ ಸಲ್ಲಿಸಿದ್ದಾರೆ. ಸಾವಿರಾರು ಜನರು ಭಾಗವಹಿಸಿದ್ದರು. ಜೈಕಾರ ಕೂಗಿ ದೇಶಾಭಿಮಾನ ಮೆರೆದಿದ್ದಾರೆ.