ಸದ್ದುಗುಂಟೆಪಾಳ್ಯದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಮಾಡಿದ್ದ ಲೋಕೇಶ್ ಗೌಡ ವಿರುದ್ದ ಕೂಡ ಎಫ್ ಐಆರ್ ದಾಖಲಾಗಿದೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಎಫ್ ಐಆರ್ ದಾಖಲಾಗಿದೆ. ಆರೋಪಿಯು ಏ. 3ರಂದು ತಡರಾತ್ರಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಲೈಂಗಿಕ ದೌರ್ಜನ್ಯ ವಿಡಿಯೋವನ್ನು ಲೋಕೇಶ್ ಗೌಡ, ಮಂಡ್ಯ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಸಂತ್ರಸ್ತ ಯುವತಿಯ ವೈಯಕ್ತಿಕ ವಿಷಯವನ್ನು ಗಮನಕ್ಕೆ ತರದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಆರೋಪ ಕೇಳಿ ಬಂದಿದೆ.
ವಿಡಿಯೋ ವೈರಲ್ ಮಾಡಿದ್ದ ಲೋಕೇಶ್ ಗೌಡಗೆ ಸದ್ದುಗುಂಟೆಪಾಳ್ಯ ಪೊಲೀಸರು ನೋಟಿಸ್ ನೀಡಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಲೋಕೇಶ್ ಗೌಡ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಲೋಕೇಶ್ ಗೌಡ ದೂರಿನನ್ವಯ ಸಂತ್ರಸ್ಥೆಯನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಂಡಿದ್ದರು. ನಂತರ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸಂತೋಷ್ ನನ್ನು ವಶಕ್ಕೆ ಪಡೆದಿದ್ದರು. ಈಗ ವಿಡಿಯೋ ವೈರಲ್ ಮಾಡಿದ್ದ ಲೋಕೇಶಗೌಡ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು.