ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಫೀಲ್ಡ್ ಗೆ ಇಳಿದಿದ್ದು, ಡ್ರಿಂಕ್ ಆಂಡ್ ಡ್ರೈವ್ ಪರಿಶೀಲನೆ ನಡೆಸಿದ್ದಾರೆ. ಆಘಾತಕಾರಿ ವಿಷಯವನ್ನೂ ಹೊರ ಹಾಕಿದ್ದಾರೆ. ಡ್ರಿಂಕ್ ಆಂಡ್ ಡ್ರೈವಿಂಗ್ ಕೇಸ್ ಗಳಿಂದಾಗಿ ಪಾಲಕರು ಮಕ್ಕಳನ್ನ ಶಾಲೆಗೆ ಕಳಿಸುವಾಗ ಎಚ್ಚರಿಕೆಯಿಂದ ಇರುವಂತಾಗಿದೆ. ಯಾಕಂದ್ರೆ ಎಣ್ಣೆ ಏರಿಸ್ಕೊಂಡು ಶಾಲಾ ವಾಹನ ಡ್ರೈವ್ ಮಾಡೋ ಕುಡುಕರನ್ನ ಪತ್ತೆ ಹಚ್ಚಿದ್ದಾರೆ.
ಶಾಲಾ ಬಸ್ ಡ್ರೈವರ್ ಗಳ ವಿರುದ್ದ ಆರ್ ಆರ್ ನಗರ ಸಂಚಾರ ಠಾಣಾ ವ್ಯಾಪ್ತಿ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ವಾಹನ ಚಾಲನೆ ಮಾಡುವರರು ಕುಡಿದು ವಾಹನ ಡ್ರೈವ್ ಮಾಡ್ತಿರೋದು ಬೆಳಕಿಗೆ ಬಂದಿದೆ. ಈ ವೇಳೆ ಪೊಲೀಸರು, ಕುಡಿದು ಚಾಲನೆ ಮಾಡಿರುವ ಚಾಲಕರನ್ನು ಬsಸ್ ಸಮೇತ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಸಂಬಂಧಪಟ್ಟ ಶಾಲೆಗಳಿಗೆ ಮಾಹಿತಿ ನೀಡಿದ್ದಾರೆ.