ಬೆಂಗಳೂರು : ಬೆಂಗಳೂರಿನ ವೀರಣ್ಣಪಾಳ್ಯ ಲೇಬರ್ ಶೆಡ್‌ನಲ್ಲಿ ಸ್ನೇಹಿತ ನಡುವೆ ಶುರುವಾಗಿದ್ದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಾರ್ಖಂಡ್ ಮೂಲದ ರಾಜು ಕೊಲೆಯಾದವ, ಸ್ನೇಹಿತ ರಾಘು ಕೊಲೆಗಾರ.
ಒಂದೇ ಶೆಡ್‌ನಲ್ಲಿ ನಾಲ್ವರು ಸ್ನೇಹಿತರು ವಾಸ್ತವ್ಯವಿದ್ದರು. ಎರಡು ದಿನದ ಹಿಂದೆ ರಾಜು ಮತ್ತು ರಾಘು ಮಧ್ಯೆ ಗಲಾಟೆ ಆರಂಭವಾಗಿ ಮುಂದುವರಿದಿತ್ತು. ಉಳಿದಿಬ್ಬರು ಸ್ನೇಹಿತರು ಕೆಲಸಕ್ಕೆ ತೆರಳಿದ್ದಾಗ ಮನೆಯಲ್ಲಿಯೇ ಇದ್ದ ರಾಜು ಮತ್ತು ರಾಘು ಮಧ್ಯೆ ಗಲಾಟೆಯಾಗಿ ರಾಜುವಿನ ಕತ್ತು ಕೊಯ್ದು ರಾಘು ಕೊಲೆ ಮಾಡಿದ್ದಾನೆ.
ಸ್ನೇಹಿತರು ರಾತ್ರಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು, ಕೊಲೆ ಆರೋಪಿ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ತೆರಳಿದ್ದ, ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.