ಹಿಂದೆ ನಟ ದರ್ಶನ್ (Darshan) ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆಯ ಮುಂದೆ ಜಮಾಯಿಸುತ್ತಿದ್ದರು. ಈಗಲೂ ಕೂಡ ಅಭಿಮಾನಿಗಳು ಬರುತ್ತಿದ್ದು, ಈ ಬಾರಿ ಮಹಿಳಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಇತ್ತೀಚೆಗೆ ದರ್ಶನ್ ಹೊಸಕೆರೆಹಳ್ಳಿ ಬಳಿ ಇರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ನಲ್ಲಿ ಹೆಚ್ಚಾಗಿ ಉಳಿದುಕೊಳ್ಳುತ್ತಿದ್ದಾರೆ. ಆದರೆ, ಇಂದು ಆರ್ಆರ್ ನಗರದ (RR Nagar) ತಮ್ಮ ನಿವಾಸಕ್ಕೆ ತೆರಳಿದ್ದರು. ಈ ವಿಷಯ ಗೊತ್ತಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬಂದ ದರ್ಶನ್, ಅಭಿಮಾನಿಗಳ ಕೈ ಕುಲುಕಿದ್ದಾರೆ.