90ರ ದಶಕದಲ್ಲಿ ಎಲ್ಲರ ಮನೆಮಾತಾಗಿದ್ದ ನಟಿ ಸುಹಾಸಿನಿ ಕನ್ನಡ, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಆಡಂಬರವಿಲ್ಲದ ರೀತಿ ಬದುಕು ಕಟ್ಟಿಕೊಂಡಿರುವ ಈ ನಟಿ ಕಂಡರೆ ಎಲ್ಲರಿಗೂ ಪ್ರೀತಿ. ಇದೀಗ ನಟಿ ಸುಹಾಸಿನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸುಹಾಸಿನಿ ಅವರು ದಾರಿಬದಿಯಲ್ಲಿ ನಿಂತು ಹನುಮಂತನ ವೇಷ ಧರಿಸಿ ಬಂದ ವ್ಯಕ್ತಿಯ ಹಾಡನ್ನು ಕೇಳಿದ್ದಾರೆ. ಈ ಹಾಡಿಗೆ ಅವರು ತಲೆದೂಗಿದ್ದಾರೆ. ಅತ್ಯಂತ ಶ್ರದ್ಧೆಯಿಂದ ಹಾಡನ್ನು ಆಲಿಸಿದ ಬಳಿಕ ಅವರು ಕಲಾವಿದನಿಗೆ ಕೈ ಮುಗಿಯುವ ಮೂಲಕ ಧನ್ಯವಾದ ಹೇಳಿದ್ದಾರೆ. ಸುಹಾಸಿನಿ ಸಣ್ಣ ಕಲಾವಿದರನ್ನೂ ಎಷ್ಟರ ಮಟ್ಟಿಗೆ ಗೌರವಿಸುತ್ತಾರೆ ಎಂಬುವುದಕ್ಕೆ ಇದೇ ಸಾಕ್ಷಿಯಾಗಿದೆ̤ ಅಮ್ಮಾ ಎಷ್ಟು ಸಿಂಪಲ್ ನೀವು, ನಿಮ್ಮ ಸರಳತೆ ಎಲ್ಲರಿಗೂ ಮಾದರಿಯಾಗಲಿ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಸುಹಾಸಿನಿ, ‘ಮುತ್ತಿನ ಹಾರ’ ಅಮೃತವರ್ಷಿಣಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಂಧನ ಸಿನಿಮಾ ಎಲ್ಲರ ಫೇವರೇಟ್ ಅಂತಾನೇ ಹೇಳಬಹುದು. ಸಾಹಸ ಸಿಂಹ ಡಾ ವಿಷ್ಣುವರ್ಧನ್, ಸುಹಾಸಿನಿ, ಹಾಗೂ ಜೈಜಗದೀಶ್ ಈ ಸಿನಿಮಾದಲ್ಲಿ ನಟಿಸಿದ್ದು, ನಂದಿನಿ ಪಾತ್ರ ಈಗಲೂ ಎಲ್ಲರ ಕಣ್ಣಿಗೆ ಕಟ್ಟಿದಂತಿದೆ. 1988ರಲ್ಲಿ ಸುಹಾಸಿನಿ ಮಣಿರತ್ನಂ ಅವರನ್ನು ವಿವಾಹವಾದರು. ಆ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು.