ಗಡಿಜಿಲ್ಲೆ ಬೀದರ್ ನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇಬ್ಬರು ನಕಲಿ ವೈದ್ಯರು, ಓರ್ವ ಸ್ಟಾಪ್ ನರ್ಸ್ಗೆ ಜಿಲ್ಲಾಧಿಕಾರಿ ಬಿಸಿ ಮುಟ್ಟಿಸಿದ್ದಾರೆ.
ಔರಾದ್ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ನಕಲಿ ವೈದ್ಯರು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕ್ಲಿನಿಕ್ ಸೀಜ್ ಮಾಡಿ ದಂಡ ವಿಧಿಸಿದ್ದಾರೆ. ಔರಾದ್ ಟಿಹೆಚ್ಒ ಡಾ.ಗಾಯತ್ರಿ, ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಡೋಂಗ್ರೆ ನೇತೃತ್ವದ ತಂಡದಿಂದ ಕ್ಲಿನಿಕ್ ಸೀಜ್ ಮಾಡಿಸಲಾಗಿದೆ.
ನಕಲಿ ವೈದ್ಯರಾದ ನಾರಾಯಣರಾವ್ ಕುಲಕರ್ಣಿ, ಬಸವರಾಜ್ ಒಂಟೆ ಎಂಬುವವರಿಗೆ ತಲಾ 50 ಸಾವಿರ ರೂ. ದಂಡ, ಸ್ಟಾಪ್ ನರ್ಸ್ ಪ್ರೇಮಾ ಜಿರಗೆ ಎಂಬುವವರಿಗೆ 1 ಲಕ್ಷ ರೂ. ದಂಡ ವಿಧಿಸಿ ವೈದ್ಯ ವೃತ್ತಿ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಯುರ್ವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ, ಪ್ರಮಾಣ ಪತ್ರ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.