ಕ್ರಿಕೆಟ್ ಲೋಕದಲ್ಲಿ ಇಂಗ್ಲೆಂಡ್ ತಂಡ ಹೊಸ ಇತಿಹಾಸ ಬರೆದಿದೆ.
ಬರೋಬ್ಬರಿ 147 ವರ್ಷಗಳ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಂಡದಿಂದ ದೊಡ್ಡ ದಾಖಲೆ ಮೂಡಿದೆ. ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ ನಲ್ಲಿ 5 ಲಕ್ಷ ರನ್ ಗಳನ್ನು ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 378 ರನ್ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡವು ಇಲ್ಲಿಯವರೆಗೆ 5 ಲಕ್ಷ ರನ್ ಗಳಿಸಿದ ಸಾಧನೆ ಮಾಡಿದೆ. ಅಲ್ಲದೇ, ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಕೂಡ ಇಂಗ್ಲೆಂಡ್ ಆಗಿದೆ.
ಇಂಗ್ಲೆಂಡ್ ತಂಡವು ಇಲ್ಲಿಯವರೆಗೆ 1082 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಲಕ್ಷ ರನ್ ಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡವು 4,28,794 ರನ್ ಗಳಿಸಿ ಎರಡನೇ ಸ್ಥಾನದಲ್ಲಿದೆ. 586 ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ತಂಡ ಇಲ್ಲಿಯವರೆಗೆ 2,78,700 ರನ್ ಗಳಿಸಿದೆ. ಈ ಪಟ್ಟಿಯಲ್ಲಿ ಭಾರತ ತಂಡವು ಮೂರನೇ ಸ್ಥಾನದಲ್ಲಿದೆ.
5 ಲಕ್ಷ ರನ್ಗಳೊಂದಿಗೆ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದೆ. ಇಂಗ್ಲೆಂಡ್ ಆಟಗಾರರು ಇಲ್ಲಿಯವರೆಗೆ 929 ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರರು 892 ಶತಕ ಸಿಡಿಸಿದ್ದಾರೆ. ಭಾರತ ತಂಡ ಮೂರನೇ ಸ್ಥಾನದಲ್ಲಿದೆ. ಭಾರತೀಯ ಆಟಗಾರರು ಇಲ್ಲಿಯವರೆಗೆ 552 ಶತಕ ಸಿಡಿಸಿದ್ದಾರೆ.