ಬರ್ತಡೇ ಪಾರ್ಟಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಬಳಕೆಯಾಗಿಲ್ಲ ಅಂತಾ ಗಾಯಕಿ ಮಂಗ್ಲಿ ಸ್ಪಷ್ಟನೆ ನೀಡಿದ್ದಾರೆ. ಪಾರ್ಟ್ ಆಯೋಜಿಸಲಾಗಿದ್ದ ರೆಸಾರ್ಟ್ ನ ಮ್ಯಾನೇಜರ್ ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ.
ಹಾಗಂತಾ ನಮಗು ಅದಕ್ಕೂ ಯಾವುದೇ ಸಂಬಂಧವಿಲ್ಲ. ಕಾರ್ಯಕ್ರಮದಲ್ಲಿ ಮದ್ಯವನ್ನು ವಿತರಿಸಲಾಗಿದೆ. ಹಾಗಂತಾ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದಾಗ ಮದ್ಯ ಸೇವನೆಗೆ ಪೊಲೀಸರಿಂದ ಅನುಮತಿ ಪಡೆಯಬೇಕೆನ್ನುವುದ ನನಗೆ ಗೊತ್ತಿರಲಿಲ್ಲ.
ಯಾರಾದರು ನನಗೆ ಮಾರ್ಗದರ್ಶನ ಮಾಡಿದರೆ ಅನುಮತಿ ಪಡೆಯುತ್ತಿದೆ. ಈ ಬಗ್ಗೆ ನನಗೆ ಪಶ್ಚಾತಾಪವಿದೆ ಅಂತಾ ಮಂಗ್ಲಿ ಸ್ಪಷ್ಟಪಡಿಸಿದ್ದಾರೆ. ಹುಟ್ಟು ಹಬ್ಬದ ವೇಳೆ ಅಪಾರ ಪ್ರಮಾಣದ ವಿದೇಶಿ ಮದ್ಯ ಜಪ್ತಿ ಮಾಡಲಾಗಿದೆ ಎನ್ನುವ ಆರೋಪವನ್ನೂ ಮಂಗ್ಲಿ ತಳ್ಳಿ ಹಾಕಿದ್ದು, ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಬರ್ತಡೇ ಸಂಭ್ರಮದ ಹೆಸರಲ್ಲಿ ನಶೆ ಪಾರ್ಟಿ ಮಾಡಲಾಗಿತ್ತೆಂಬ ಆರೋಪವನ್ನೀಗ ಖುದ್ದು ಗಾಯಕಿಯೇ ತಳ್ಳಿಹಾಕಿದ್ದಾರೆ