ಬೆಂಗಳೂರು ಗ್ರಾಮಾಂತರ : ಟೋಲ್ ಕಟ್ಟುವ ವಿಚಾರದಲ್ಲಿ ಕಾರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ದೊಡ್ಡಬಳ್ಳಾಪುರದ ಹುಲಿಕುಂಟೆ ಬಳಿ ನಡೆದಿದೆ.
ವೆಂಕಟೇಶ್ ಹಲ್ಲೆಗೆ ಒಳಗಾದ ವ್ಯಕ್ತಿ. ಟೋಲ್ ಕಟ್ಟುವ ವಿಚಾರದಲ್ಲಿ ನಾನು ಸ್ಥಳೀಯ ಎಂದು ಪ್ರಶ್ನೆ ಮಾಡಿ, ಹಣ ಕಟ್ಟಲು ತಡ ಮಾಡಿದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಈ ವೇಳೆ ಚಾಲಕನಿಗೆ ಟೋಲ್ ಸಿಬ್ಬಂದಿ ಮುಖದಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಶಂಕರ್, ಯಶವಂತ, ಸುದೀಪ, ರಾಜು, ಆನಂದ್ ಸೇರಿದಂತೆ 8 ಜನ ಟೋಲ್ ಸಿಬ್ಬಂದಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದು, ಸದ್ಯ ಹಲ್ಲೆ ನಡೆಸಿದವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.