ಪ್ರತಿಯೊಬ್ಬರೂ ಕೂಡ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವಲ್ಲಿ ಸಾಕಷ್ಟು ರೀತಿ ಸರ್ಕಸ್ ಮಾಡುತ್ತಾರೆ. ತಮ್ಮ ಚರ್ಮವನ್ನು ಶುಚಿಯಾಗಿಟ್ಟುಕೊಳ್ಳಲು ವಿವಿಧ ರೀತಿಯಾದಂತಹ ಕ್ರೀಮ್ ಗಳನ್ನು ಬಳಸುತ್ತಾರೆ. ಒಂದು ಕ್ರೀಮ್ ಗಳು ನಿಮಗೆ ಸಹಾಯ ಆಗುತ್ತದೆ. ಕೆಲವೊಂದು ನಮ್ಮ ಸ್ಕಿನ್ ಗೆ ಸಮಸ್ಯೆ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಹೆಡ್ಸ್ ವೈಟ್ ಗಳಿಂದ ಮುಖದ ಸೌಂದರ್ಯವೇ ಮಂಕಾಗುತ್ತಾ ಹೋಗುತ್ತಿದೆ. ಪ್ರತಿಯೊಬ್ಬರೂ ಇಂತಹ ಸಮಸ್ಯೆಯಿಂದ ರೋಸಿ ಹೋಗಿರುವುದೇ ಹೆಚ್ಚು. ಹೀಗಾಗಿ ಇದಕ್ಕೆ ಕೆಲವೊಂದು ಸರಳ ಉಪಾಯಗಳನ್ನು ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.
ಚರ್ಮಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ಪ್ರತಿಯೊಬ್ಬರಲ್ಲೂ ಕಾಡುತ್ತದೆ ನಾವು ಸುಂದರವಾಗಿ ಕಾಣಲು ಚರ್ಮದ ಬಗ್ಗೆ ಕಾಳಜಿಯನ್ನ ವಹಿಸುತ್ತೇವೆ. ಚರ್ಮ ಕಲೆರಹಿತವಾಗಿ ಇರಬೇಕೆಂದು ನಾವೆಲ್ಲರೂ ಕೂಡ ಬಯಸುತ್ತೇವೆ. ನಮ್ಮ ದಿನ ನಿತ್ಯದ ಜೀವನಶೈಲಿ ಕೆಟ್ಟ ಆಹಾರ ಪದ್ಧತಿ ಮಾಲಿನ್ಯ ಮತ್ತು ಇತರ ಹಲವಾರು ವಿಷಯಗಳು ಚರ್ಮದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಹೆಚ್ಚು ಹೆಚ್ಚು ನೀರು ಸೇವಿಸಿ!
ಪ್ರತಿದಿನ ಕೂಡ ಹೆಚ್ಚಾಗಿ ನೀರನ್ನು ಸೇವಿಸಿದರೆ ಉತ್ತಮ. ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾದರೆ ಸಾಕಷ್ಟು ಕಾಯಿಲೆಗಳನ್ನು ತಡೆಯಬಹುದು. ದೇಹದಲ್ಲಿ ಕಡಿಮೆ ನೀರಿನ ಅಂಶ ಇದ್ದರೆ ಮುಖದಲ್ಲಿ ತೇಜಸ್ಸು ಕಡಿಮೆಯಾಗುತ್ತದೆ ಜೊತೆಗೆ ಮುಖದಲ್ಲಿ ಮೊಡವೆ ಇನ್ನಿತರ ಕಾಯಿಲೆಗಳು ಶುರುವಾಗುತ್ತದೆ. ಹೀಗಾಗಿ ನೀರನ್ನು ಕುಡಿಯುವುದು ಉತ್ತಮ.

ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಬರೋಕೆ ಕಾರಣ ಏನು?
ಬ್ಲ್ಯಾಕ್ಹೆಡ ಗಳನ್ನು ಓಪನ್ ಕಾಮೆಡೋನ್ ಗಳು ಎಂದು ಕರೆಯಲಾಗುತ್ತದೆ ಮತ್ತು ವೈಟ್ಹೆಡ್ಗಳನ್ನು ಕ್ಲೋಸ್ಡ್ ಕಾಮೆಡೋನ್ಗಳು ಎಂದು ಕರೆಯಲಾಗುತ್ತದೆ. ಅದನ್ನು ತೆಗೆದುಹಾಕಲು, ಜನರು ಸ್ಕ್ರಬ್ಗಳು ಮತ್ತು ಇತರ ಅನೇಕ ವಸ್ತುಗಳನ್ನು ಬಳಸುತ್ತಾರೆ.ಕಪ್ಪು ಚುಕ್ಕೆಗಳು ಮತ್ತು ಬಿಳಿ ಚುಕ್ಕೆಗಳಿಗೆ ಮುಖ್ಯ ಕಾರಣ ಚರ್ಮದ ರಂಧ್ರಗಳಲ್ಲಿ ಕೊಳಕು, ಎಣ್ಣೆ ಅಂದರೆ ಮೇದೋಗ್ರಂಥಿಗಳ ಸ್ರಾವ ಮತ್ತು ಸತ್ತ ಚರ್ಮದ ಕೋಶಗಳು ಸಂಗ್ರಹವಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಮಸ್ಯೆ ಹೆಚ್ಚಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಲ್ಲಿ ಕಂಡು ಬರುತ್ತದೆ. ಆದರೆ ಹಾರ್ಮೋನುಗಳ ಬದಲಾವಣೆಗಳು, ಕೆಟ್ಟ ಆಹಾರ ಪದ್ಧತಿ, ಒತ್ತಡ ಮತ್ತು ಚರ್ಮವನ್ನು ಸರಿಯಾಗಿ ಸ್ವಚ್ಛ ಗೊಳಿಸದಿರುವುದು ಸಹ ಇದಕ್ಕೆ ಕಾರಣವಾಗಬಹುದು.ಇದನ್ನು ಕಡಿಮೆ ಮಾಡಲು, ಹೆಚ್ಚುವರಿ ಎಣ್ಣೆ ಮತ್ತು ಕೊಳೆಯನ್ನು ತೆಗೆದುಹಾಕಲು ದಿನಕ್ಕೆ ಎರಡು ಬಾರಿ ಸೌಮ್ಯವಾದ ಫೇಸ್ ವಾಶ್ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದು ಅತ್ಯಂತ ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ.