ಕೋಲಾರ: ಜಮೀನಿನ ವಿಚಾರಕ್ಕೆ ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಪಂ ಮಾಜಿ ಅಧ್ಯಕ್ಷ್ಯ ನಾಗರಾಜ್ ಹಾಗೂ ಸುಮನ್, ಮೋಹನ್ ಎಂಬುವರು ನರಸಿಂಹಪ್ಪ, ವೆಂಕಟಗಿರಿಯಮ್ಮ, ಇಂದಿರಮ್ಮ, ಚಂದ್ರಶೇಖರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ನರಸಿಂಹಪ್ಪ ಅವರಿಗೆ ಸೇರಿದ ನಿವೇಶನದ ಜಾಗದಲ್ಲಿ, 3 ಅಡಿ ಜಾಗವನ್ನು ನಾಗರಾಜ್ ಒತ್ತುವರಿ ಮಾಡಿಕೊಂಡಿರುವುದರಿಂದ ಹಲವು ತಿಂಗಳಿಂದ ಎರಡೂ ಕುಟುಂಬದ ಮಧ್ಯೆ ಗಲಾಟೆ, ವಾಗ್ವಾದ ನಡೆಯುತಿತ್ತು. ಅದು ಅತಿರೇಕಕ್ಕೆ ತೆರಳಿ ಮಚ್ಚು, ದೊಣ್ಣೆಗಳಿಂದ ನಾಗರಾಜ್ ಹಾಗೂ ಕುಟುಂಬಸ್ಥರಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಲಾಗಿದ್ದು, ಮಾಲೂರಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.