ಮಂಡ್ಯ : ಸಭೆಗೆ ಗೈರಾದ ಕಾರಣ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕನ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಡ್ಯದ ಮಳವಳ್ಳಿಯ ನಂಜೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಡೈರಿಗೆ ನಿರ್ದೇಶಕ ಮಹದೇವಸ್ವಾಮಿ ಹಾಲು ಹಾಕಲು ಹೋದ ವೇಳೆ ಸಭೆಗೆ ಬಂದಿಲ್ಲ ಎಂದು ಡೈರಿ ಅಧ್ಯಕ್ಷ ಶಿವ ಪ್ರಸಾದ್ ಹಾಲು ಚೆಲ್ಲಿ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಹಾಲು ತೆಗೆದುಕೊಳ್ಳದೆ, ಬಾಕಿ ಹಣ ನೀಡದೆ ಹಲ್ಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಮಹದೇವಸ್ವಾಮಿ ದೂರು ನೀಡಿದ್ದಾರೆ.