ನವದೆಹಲಿ: ಕದನ ವಿರಾಮದ ಬೆನ್ನಲ್ಲೇ ಪಾಕ್ ಬಾಲ ಬಿಚ್ಚಿದೆ ಎಂಬ ಆರೋಪ ಕೇಳಿ ಬಂದಿದೆ.
ಸಂಜೆ 5 ಗಂಟೆಯ ವೇಳೆಗೆ ಭಾರತ ಹಾಗೂ ಪಾಕ್ ಮಧ್ಯೆ ಕದನ ವಿರಾಮ ಘೋಷಣೆಯಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಈ ವಿಷಯ ಪ್ರಕಟಿಸುತ್ತಿದ್ದಂತೆ, ಎರಡೂ ರಾಷ್ಟ್ರಗಳು ಕದನ ವಿರಾಮದ ಬಗ್ಗೆ ಮಾಹಿತಿ ನೀಡಿದ್ದವು. ಆದರೆ, ಈಗ ಮತ್ತೆ ಪಾಕ್ ಬಾಲ ಬಿಚ್ಚಿದೆ ಎನ್ನಲಾಗುತ್ತಿದೆ.
ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಮ್ಮುವಿನ ಅಖ್ನೂರ್, ಕನಾಚಕ್, ಪರ್ಗ್ವಾಲ್, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿ ಬಂದಿವೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಕುರಿತು ಭಾರತೀಯ ರಕ್ಷಣೆ ಪಡೆ ತಿಳಿಸಿಲ್ಲ.