ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತಂಡ ಇಂದು(ಶುಕ್ರವಾರ) ಸಾಕ್ಷಿ ದೂರುದಾರ ಸೂಚಿಸಿದ ಸ್ಥಳದಲ್ಲಿ ನಡೆಸಿದ ಉತ್ಖನನ ಕಾರ್ಯ ವಿಫಲವಾಗಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಆ.8 ರಂದು ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು.
ಇದೀಗ ಹೊಸ ಸ್ಥಳಕ್ಕೆ ಸಾಕ್ಷಿ ದೂರುದಾರನನ್ನು ಕರೆತಂದಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 5.30 ರವರೆಗೆ ಉತ್ಖನನ ಕಾರ್ಯ ನಡೆಸಿದರೂ ಯಾವುದೇ ಕಳೇಬರದ ಸಾಕ್ಷಿ ದೊರೆತಿಲ್ಲ ಎಂದು ತಿಳಿದುಬಂದಿದೆ.
15 ನೇ ಸ್ಥಳದ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ ಈ ಹಿಂದೆ ಹೇಳಿದಂತೆ ಕಲ್ಲೇರಿಯಿಂದ ಸ್ವಲ್ಪ ದೂರದಲ್ಲಿ ಬಾಲಕಿಯೋರ್ವಳ ಶವವನ್ನು ಶಾಲಾ ಬ್ಯಾಗ್ ಸಮೇತ ಹೂಳಲಾಗಿದೆ ಎಂಬ ದೂರಿನನ್ವಯ ಇಂದಿನ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಎಸ್.ಐ.ಟಿ. ಮೂಲ ಈ ಬಗ್ಗೆ ಯಾವ ಮಾಹಿತಿ ಲಭ್ಯವಿಲ್ಲ.