ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಾ ಪ್ರದೇಶಗಳಲ್ಲಿ ನಡೆಯುತ್ತಿರುವ ಮೃತ ದೇಹಗಳ ಉತ್ಖನನ ಕಾರ್ಯದಲ್ಲಿ ಹೊಸ ಬೆಳವಣಿಗೆ ನಡೆದಿದ್ದು, ಸಾಕ್ಷಿ ದೂರುದಾರ ಇಂದು ಹೊಸ ಸ್ಥಳಕ್ಕೆ ಎಸ್‌ಐಟಿ ತಂಡವನ್ನು ಕರೆದೊಯ್ದಿದ್ದಾರೆ. ಅಲ್ಲಿ ಮಾನವ ಅಸ್ಥಿಪಂಜರದ ಕಳೇಬರವೊಂದು ಪತ್ತೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.
ಈ ಬಗ್ಗೆ ಎಸ್.ಐ.ಟಿ ಮೂಲಗಳು ಯಾವುದೇ ಸ್ಪಷ್ಟನೆಯನ್ನು ನೀಡುವುದಕ್ಕೆ ಮುಂದಾಗಿಲ್ಲ. ಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ, ಹೊಸ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿದೆ. ಬೆಳಗ್ಗೆ 11.30 ಕ್ಕೆ ಅರಣ್ಯವನ್ನು ಪ್ರವೇಶಿಸಿದ ಎಸ್.ಐ.ಟಿ ತಂಡ ನಾಲ್ಕು ಗಂಟೆಯವರೆಗೂ ಎಸ್.ಐ.ಟಿ ತಂಡ ಅರಣ್ಯದಿಂದ ಇನ್ನೂ ಹೊರಬಂದಿಲ್ಲ. ಅಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿರುವುದರ ಬಗ್ಗೆ ಶಂಕೆ ಮೂಡಿದೆ. ಅಲ್ಲಿ ಹೆಚ್ಚಿನ ಪ್ರಕ್ರಿಯೆಯಲ್ಲಿ ಎಸ್.ಐ.ಟಿ ತಂಡ ತೊಡಗಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಅರಣ್ಯದ ಒಳಭಾಗಕ್ಕೆ ನಾಲ್ವರು ಸಶಸ್ತ್ರ ತಂಡದ ಸದಸ್ಯರು ತೆರಳಿದ್ದಾರೆ. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಎರಡು ಮೂಟೆ ಉಪ್ಪನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.