ಹಾವೇರಿ : ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿರುವುದರ ನಡುವೆ ಗುಂಪು ಸಂಘರ್ಷ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಹಾವೇರಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಚೌಧರಿ, ತನಿಖೆಗೆ ಎಲ್ಲರೂ ಸಹಕಾರ ಮಾಡಬೇಕು. ತನಿಖೆಗೆ ಎಲ್ಲರೂ ಸಹ ಸಹಕರಿಸಬೇಕು. ಸತ್ಯ, ಅಸತ್ಯ ಎಲ್ಲವೂ ತನಿಖೆಯ ವರದಿ ಬಂದ ಮೇಲೆಯೇ ತಿಳಿಯುತ್ತದೆ. ತನಿಕೆ ಪೂರ್ಣಗೊಳ್ಳುವವರೆಗೆ ತಾಳ್ಮೆ ಮುಖ್ಯ ಎಂದವರು ಹೇಳಿದ್ದಾರೆ.
ಇಂತಹ ಸಂಘರ್ಷಗಳ ಮೂಲಕ ತಪ್ಪು ಸಂದೇಶ ರವಾನಿಸುವ ಅವಶ್ಯಕತೆಯಿಲ್ಲ. ಎಲ್ಲರಿಗೂ ಸ್ವಲ್ಪ ತಾಳ್ಮೆ ಇರಲಿ, ಹಾಗೆ ತನಿಖೆ ಮೇಲೆ ನಂಬಿಕೆ ಇರಲಿ ಎಂದಿದ್ದಾರೆ.