ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್.ಐ.ಟಿ ರಚನೆ ಮಾಡಿದೆ. ಪ್ರಕರಣದ ಬಗ್ಗೆ ತನಿಖೆಯಿಂದ ಸತ್ಯಾಂಶ ಹೊರಬರಲಿ. ಪೂರ್ವಾಗ್ರಹ ಬೇಡ. ಸಮರ್ಪಕವಾದ ತನಿಖೆ ಮುಖಾಂತರ ಎಲ್ಲ ವಿಷಯಗಳು ತಿಳಿಯುತ್ತದೆ. ಯಾವ ಕಾನೂನು ಕ್ರಮ ಆಗಬೇಕು ಅದು ಆಗುತ್ತದೆ. ತನಿಖೆ ಆಗುವ ಸಂದರ್ಭದಲ್ಲಿ ಮೊದಲೇ ತೀರ್ಪು ಕೊಡುವುದು ಬೇ ಎಂದು ವಿಧಾನಸಭಾ ಸಭಾಪತಿ ಯು. ಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಪ್ರಕರಣದ ಬಗ್ಗೆ ನಾವೇ ತೀರ್ಪು ಕೊಟ್ಟು ತೀರ್ಮಾನ ಮಾಡುವುದು ಬೇಡ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕ್ಷೇತ್ರದ ಪವಿತ್ರತೆಗೆ ಧಕ್ಕೆ ಬರಬಾರದು. ಸಂಸ್ಥೆ ಕಟ್ಟಲು ಬಹಳ ಕಷ್ಟವಿದೆ. ಸಂಸ್ಥೆಯಿಂದ ಎಷ್ಟೋ ಜನರಿಗೆ ಪ್ರಯೋಜನವಾಗಿದೆ. ಸಮರ್ಪಕವಾದ ತನಿಖೆ ಆಗಲಿ ಎಂದು ಹೇಳಿದ್ದಾರೆ.
ಯಾರೇ ತಪ್ಪಿತಸ್ಥರಿದ್ದರೆ ಬಹಿರಂಗವಾಗಲಿ. ತನಿಖೆಯನ್ನು ಎಸ್ಐಟಿಗೆ ನೀಡಲಾಗಿದೆ. ಎಸ್ಐಟಿ ತನಿಖೆ ಪ್ರಾರಂಭಿಸುತ್ತದೆ. ತನಿಖೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಡಿ. ಸತ್ಯಾಂಶ ಹೊರಬರಲಿ. ಯಾರೇ ತಪ್ಪಿತಸ್ಥರಿದ್ದರು ಕ್ರಮ ಆಗುತ್ತದೆ. ಎಸ್ಐಟಿ ತನಿಖೆ ಆಗಿ ಸತ್ಯಾಂಶ ಹೊರಗೆ ಬರುವ ತನಕ ಪೂರ್ವಗ್ರಹ ಪೀಡಿತ ತೀರ್ಪುಗಳನ್ನು ಕೊಡಬೇಡಿ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.
ಧರ್ಮಸ್ಥಳ ಪಾವಿತ್ರತೆಯ ಕ್ಷೇತ್ರ. ಕ್ಷೇತ್ರವೇ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಕಪ್ಪು ಚುಕ್ಕೆ ತರುವ ಕೆಲಸ ಬೇಡ. ಇದು ನನ್ನ ಅಭಿಪ್ರಾಯ ಬೇರೆ ಬೇರೆ ಅಭಿಪ್ರಾಯ ಇರಬಹುದು. ತನಿಖೆಯಿಂದ ನಿಜಾಂಶ ಹೊರಬರಲಿ.