ಹಾವೇರಿ : ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿಯೋರ್ವ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಅನಾಮಿಕ ವ್ಯಕ್ತಿಯನ್ನು ಮೊದಲು ಮಾನಸಿಕ ತಜ್ಞರ ಪರೀಕ್ಷೆ ಒಳಪಡಿಸಿ ಎಂದು ಹೇಳಿಕೆ ನೀಡಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿದ ಪಾಟೀಲ್, ಆತ ಮಾನಸಿಕ ಸ್ವಸ್ಥನೋ ಅಥವಾ ಅಸ್ವಸ್ತನೋ ಮೊದಲು ಪರೀಕ್ಷಿಸಿ. ಕಾಡಿನಲ್ಲಿ ಹರಸಾಹಸ ಪಟ್ಟು ಆತ ಗುರತಿಸಿದ ಸ್ಥಳವನ್ನು ಅಗೆದರೂ ಏನೂ ಸಹ ಸಿಗುತ್ತಿಲ್ಲ. ಕೆಲವು ಬಾರಿ ಹುಚ್ಚುರು ಹುಚ್ಚರಂತೆ ಹೇಳಿಕೆ ಕೊಟ್ಟು ಬೀಡುತ್ತಾರೆ. ಪ್ರಚಾರಕ್ಕಾಗಿ ಯಾವೋದೊ ಒಂದು ಹೇಳಿಕೆ ಕೊಡುತ್ತಾರೆ. ನಾನು ಒಬ್ಬ ಮಾಜಿ ಪೊಲೀಸ್ ಆಗಿ ಈ ಮಾತು ಹೇಳುತ್ತಿದ್ದೇನೆ. ಆತನನ್ನು ಮಾನಸಿಕ ತಜ್ಞರ ಬಳಿ ಪರೀಕ್ಷಿಸಿದರೆ, ಕಷ್ಟ ಪಡುವ ಪ್ರಮೇಯ ಬರಲ್ಲ. SIT ತನಿಖೆ ವಹಿಸಿರೋದು ಸರಿಯಾದ ಕ್ರಮವೇ ಆಗಿದೆ. ಈ ಬಗ್ಗೆ ಮೆಚ್ಚುಗೆಯಿದೆ. ಸತ್ಯಾಂಶದ ಹೆಸರಲ್ಲಿ ಕಷ್ಟಪಡುವ ಬದಲು ಬುದ್ಧಿವಂತಿಕೆ ವಹಿಸಿ. ಮಾನಸಿಕವಾಗಿ ಸರಿಯಾಗಿರುವ ಬಗ್ಗೆ ಖಚಿತಪಡಿಸಿ ತನಿಖೆ ನಡೆಸಿ ಎಂದು ಸಲಹೆ ನೀಡಿದ್ದಾರೆ.