ಪುರಿ: ಪುರಿ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ಸಂದರ್ಭದಲ್ಲಿ ಭಗವಾನ್ ಬಲಭದ್ರನ ರಥ ಎಳೆಯುವ ವೇಳೆ ಭಾರೀ ಅವಘಡವೊಂದು ನಡೆದಿದ್ದು, ಸುಮಾರು 600ಕ್ಕೂ ಅಧಿಕ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತ ಉಂಟಾಗಿದೆ. ಈ ಜಾತ್ರೆಯಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ. ಜಗನ್ನಾಥ ದೇವಾಲಯದಿಂದ ಗುಂಡಿಚ ದೇವಾಲಯಕ್ಕೆ ಮೆರವಣಿಗೆ ಹೋಗಿರುತ್ತದೆ. ತನ್ನ ಸಹೋದರರಾದ ಬಲಭದ್ರ ಮತ್ತು ದೇವತೆ ಸುಭದ್ರಾ ಅವರೊಂದಿಗೆ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಗುಂಡಿಚ ದೇವಾಲಯಕ್ಕೆ ಭಗವಾನ್ ಜಗನ್ನಾಥನ ಮೆರವಣಿಗೆ ಮೂಲಕ ಸಾಗುತ್ತಾನೆ. ನಂತರ ಗುಂಡಿಚ ದೇವಾಲಯದಲ್ಲಿ ಒಂದು ವಾರ ಇದ್ದು, ನಂತರ ಇದೇ ರೀತಿಯ ಮೆರವಣಿಗೆಯಲ್ಲಿ ಹಿಂತಿರುಗುತ್ತಾರೆ.
ತಾಳಧ್ವಜ ರಥದ ಪವಿತ್ರ ಹಗ್ಗಗಳನ್ನು ಹಿಡಿಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುತ್ತಾರೆ. ಆದರೆ, ಜನದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿದೆ. ಪರಿಣಾಮ 600ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ.