ಚಾಲೆಜಿಂಗ್ ಸ್ಟಾರ್ ದರ್ಶನ್ ಸಖತ್ ಆಕ್ಟೀವ್ ಆಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬೇಲ್ ಪಡೆದು ಹೊರ ಬಂದಿರುವ ದರ್ಶನ್, ಡೆವಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡೆವಿಲ್ ಸಿನಿಮಾದಲ್ಲಿ ದಿನೇ ದಿನೇ ಹೊಸ ಅಪ್ಡೇಟ್ ಗಳು ಹೊರಬರುತ್ತಿವೆ.

ಅದರಲ್ಲೂ ಡೆವಿಲ್ ಸಿನಿಮಾದಲ್ಲಿ ಅಂಬರೀಶ್ ಅಬಿನಯದ ಅಂತ ಚಿತ್ರದ ಕನ್ವರ್ ಲಾಲ್ ಲುಕ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಅಂಬಿ ಮತ್ತು ದಚ್ಚು ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಅಂಬಿ ಜೊತೆ ಕೆಲಸ ಮಾಡಿದ್ದ ವಿಗ್ ಮೇಕರ್ ಡೆವಿಲ್ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ ಎಂಬುದೇ ವಿಶೇಷ.
ಅಂದು ಅಂತ ಚಿತ್ರದಲ್ಲಿ ಅಂಬಿ ಕನ್ವರ್ ಲಾಲ್ ಪಾತ್ರಕ್ಕೆ ವಿಗ್ ಮಾಡಿದ್ದ ನಾಗೇಶ್ವರ ರಾವ್, ಇಂದು ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರಕ್ಕೆ ವಿಗ್ ರೆಡಿ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ವಿಗ್ ಕೆಲಸದಲ್ಲಿ ಹೆಸರು ಮಾಡಿರುವ ನಾಗೇಶ್ವರ ರಾವ್ ಅಂತ ಚಿತ್ರದ ನಂತರ ಮತ್ತೆ ಡೆವಿಲ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಡೆವಿಲ್ ಚಿತ್ರದಲ್ಲಿ ಅಂತ ಚಿತ್ರದ ಅಂಬಿ ಪಾತ್ರದ ಸನ್ನಿವೇಶ ಇದ್ದು ಅದಕ್ಕೆ ಸೂಟ್ ಆಗುವ ರೀತಿಯಲ್ಲೇ ನಾಗೇಶ್ವರ ರಾವ್ ವಿಗ್ ಮಾಡಿದ್ದಾರೆ ಎನ್ನಲಾಗಿದೆ.