ಬೆಂಗಳೂರು: ರಾಜ್ಯದಲ್ಲಿ ಸದ್ದಿಲ್ಲದೇ ಡೆಂಘೀ ಜ್ವರದ ಪ್ರಕರಣಗಳು ಏರಿಕೆಯಾಗುತ್ತಿದೆ, ಸತತ ಮಳೆಯಿಂದಾಗಿ ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದು, ಈಗಾಗಲೇ ಐದು ಸಾವಿರ ಗಡಿ ದಾಟಿದೆ.
ರಾಜ್ಯದಲ್ಲಿ ಈವರೆಗೂ 5000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಕಳೆದ ಒಂಭತ್ತು ತಿಂಗಳಲ್ಲಿ 5093 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಮಾತ್ರ 2478 ಪ್ರಕರಣಗಳು ವರದಿಯಾದರೆ. ಬೆಂಗಳೂರನ್ನು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ವರದಿಯಾಗಿವೆ.
ನಿಂತ ನೀರಲ್ಲಿ ಬೆಳೆಯುವ ಈಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
“ಡೆಂಘೀಯ ಗುಣಲಕ್ಷಣಗಳೇನು”?
ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕೀಲುನೋವು, ವಾಂತಿ- ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಇವುಗಳು ಡೆಂಘೀ ಜ್ವರದ ಗುಣಲಕ್ಷಣಗಳಾಗಿವೆ.