ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದ ಹಿನ್ನೆಲೆಯಲ್ಲಿ ಹಾಗೂ ಪಾಕ್ ತನ್ನ ಕುತಂತ್ರ ನಡೆಸಿದ್ದಾಗಿ ಐಪಿಎಲ್ ಪಂದ್ಯ ರದ್ದು ಮಾಡಲಾಗಿದೆ.
ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ (Dharmashala) ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ಮಧ್ಯೆ ನಡೆಯುತ್ತಿರುವ ಪಂದ್ಯ ರದ್ದುಗೊಳಿಸಲಾಗಿದೆ.
ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮೈದಾನದೊಳಗಿನ ದೀಪ ಆರಿಸಲಾಯಿತು. ವೀಕ್ಷಿಕರು ಹೊರ ನಡೆದಿದ್ದಾರೆ.
ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯ ರದ್ದಾದ ಕಾರಣ ಈಗ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್ 10 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತ್ತು.