ಮುಂಬೈ ವಿರುದ್ಧ ಗುಜರಾತ್ ಟೈಟನ್ ಸೋಲು ಕಂಡಿದ್ದು, ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಬಾರಿ ಫೈನಲ್ಸ್ ಗೆದ್ದು ಕಪ್ ತಮ್ಮದಾಗಿಸಿಕೊಳ್ಳುವ ವಿಶ್ವಾಸ ಮೂಡಿಸಿದ್ದ ಜಿಟಿ ಮುಂಬೈಗೆ ಸೋತು ಶರಣಾಗಿದೆ. ಒಂದೆಡೆ ಅಭಿಮಾನಿಗಳ ಶೋಕ ಗೀತೆಯಾದರೆ, ಇನ್ನೊಂದೆಡೆ ಜಿಟಿ ಆಟಗಾರರ ಕುಟುಂಬಸ್ತರ ನೋವೂ ಮುಗಿಲು ಮುಟ್ಟಿದೆ.
ಅದರಲ್ಲೂ ಲ್ಲೂ ನಾಯಕ ಶುಭಮನ್ ಗಿಲ್ ಸಹೋದರಿಯಂತೂ ಕ್ರೀಡಾಂಗಣದಲ್ಲೇ ಗಳಗಳನೆ ಅತ್ತಿದ್ದಾರೆ. ಅಣ್ಣನ ತಂಡ ಸೋಲುತ್ತಿದ್ದಂತೆ ಸಹೋದರಿ ಶಹನೀಲ್ ಕಣ್ಣಲ್ಲಿ ಗಂಗಾ ಮಾತೆಯೇ ಹರಿಯಲು ಆರಂಭಿಸಿಬಿಟ್ಟಿದೆ. ಒಂದೆಡೆ ಸಹೋದರ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕನಾಗಿದ್ದ ಸಂಭ್ರಮವಿದ್ದರೂ ಐಪಿಎಲ್ ಸೋಲು ಶಹನೀಲ್ ರನ್ನ ಇನ್ನಿಲ್ಲದಂತೆ ಘಾಸಿಗೊಳಿಸಿದೆ.
ಇನ್ನೊಂದೆಡೆ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಗಿರುವ ಆಶಿಶ್ ನೆಹ್ರಾ ಪುತ್ರನ ಕಣ್ಣೀರಿಗೂ ಕೊನೆಯಿರಲಿಲ್ಲ. ಅಪ್ಪನ ಸಾರಥ್ಯದ ತಂಡ ಸೋಲಿನತ್ತ ಮುಖ ಮಾಡುತ್ತಿದ್ದಂತೆ ಆಶಿಶ್ ಪುತ್ರ, ಆರುಷ್ ಕಣ್ಣೀರ ಕೋಡಿಯಾದರು. ಮೈದಾನದಲ್ಲೇ ಅತ್ತ ಆರುಷ್ ಸೋಲನ್ನು ಅರಗಿಸಿಕೊಳ್ಳಲು ಆಗದ ಸ್ಥಿತಿಯಲ್ಲಿಲ್ಲದ್ದು ಕಾಣುತ್ತಿತ್ತು.