ಬೆಂಗಳೂರು: ಡಿಸಿಇಟಿ-25ಗೆ (DCET) ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ಸದ್ಯ ಇದ್ದ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೇ 13ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಹೇಳಿದ್ದಾರೆ. ಡಿಪ್ಲೊಮಾ ಮಾಡಿದವರಿಗೆ ಎಂಜಿನಿಯರಿಂಗ್ ಕೋರ್ಸ್ಗೆ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ನೀಡಲು ಡಿಸಿಇಟಿ ನಡೆಸಲಾಗುತ್ತದೆ.
ಮೇ 13ರಂದು ಬೆಳಗ್ಗೆ 11ರ ವರೆಗೆ ಅರ್ಜಿ ಸಲ್ಲಿಸಿ, ಅಂದು ಸಂಜೆ 6ರೊಳಗೆ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ.