ಬೆಂಗಳೂರು: ರಾಜ್ಯದಲ್ಲಿ ಕಂದಮ್ಮಗಳ ಮೇಲಿನ ಕ್ರೌರ್ಯ ಹೆಚ್ಚಾಗುತ್ತಿದ್ದು, ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಅಪ್ರಾಪ್ತರ ಮೇಲೆ ನಡೆದಿರುವ ಅಂಕಿ-ಅಂಶ ಈಗ ಬಯಲಾಗಿದ್ದು, ಮೃಗೀಯ ದುರುಳರ, ಕಾಮುಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 10,247 ಪೋಕ್ಸೋ ಪ್ರಕರಣ ವರದಿಯಾಗಿವೆ. ಈ ಪೈಕಿ 6,945 ಪೋಕ್ಸೋ ಪ್ರಕರಣ ಇನ್ನೂ ಪೆಂಡಿಂಗ್ ಇವೆ.
ಬೆಂಗಳೂರಲ್ಲಿ ಮಕ್ಕಳಿಗೆ ರಕ್ಷಣೆ ಇಲ್ವಾ?
ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಕೂಡ ಆತಂಕಕ್ಕೆ ಕಾರಣವಾಗುತ್ತಿದೆ. ಪ್ರತಿ ವರ್ಷವೂ ಬೆಂಗಳೂರಿನಲ್ಲಿ 400ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ದಾರೆ.
ಪೋಕ್ಸೋ ಪ್ರಕರಣಗಳ ಅಂಕಿ-ಸಂಖ್ಯೆ ಹೇಗಿದೆ?
ವರ್ಷ : 2022
ಪೋಕ್ಸೋ ಕೇಸ್ ವರದಿಯಾಗಿರುವುದು- 3,110
ಪೆಂಡಿಂಗ್ ಪ್ರಕರಣಗಳು-1,623
ಶಿಕ್ಷೆಯಾಗಿರುವ ಪ್ರಕರಣ -123
ಸುಳ್ಳು ಕೇಸ್ಗಳು ದಾಖಲಾಗಿರುವುದು-56
ವರ್ಷ: 2023
ಪೋಕ್ಸೋ ಕೇಸ್ ವರದಿಯಾಗಿರುವುದು-3,718
ಪೆಂಡಿಂಗ್ ಪ್ರಕರಣಗಳು—2,725
ಶಿಕ್ಷೆಯಾಗಿರುವ ಪ್ರಕರಣಗಳು -53
ಸುಳ್ಳು ಕೇಸ್ಗಳು ದಾಖಲಾಗಿರುವುದು-54
ವರ್ಷ- 2024
ಪೋಕ್ಸೋ ಕೇಸ್ ವರದಿಯಾಗಿರುವುದು-3,419
ಪೆಂಡಿಂಗ್ ಪ್ರಕರಣಗಳು- 2,725 ಕೇಸ್
ಶಿಕ್ಷೆಯಾಗಿರುವ ಪ್ರಕರಣಗಳು -02
ಸುಳ್ಳು ಕೇಸ್ ಗಳು ದಾಖಲಾಗಿರುವುದು-38