ಬೆಂಗಳೂರು: ನಡು ರಸ್ತೆಯಲ್ಲಿಯೇ ಯುವಕ- ಯುವತಿ ಹುಚ್ಚಾಟ ಮೆರೆದಿರುವ ಘಟನೆ, ಬೆಂಗಳೂರಿನ ಟ್ರಿನಿಟಿ ರಸ್ತೆಯಲ್ಲಿ ನಡೆದಿದೆ. ಕಾರಿನ ಸನ್ ರೂಪ್ ನಿಂದ ಹೊರಬಂದು ಜೋಡಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಾ ನಡುರಸ್ತೆಯಲ್ಲೇ ಚುಂಬಿಸಿ ಅತಿರೇಕದ ವರ್ತನೆ ತೋರಿದ್ದಾರೆ.
ಈ ಹುಚ್ಚಾಟದ ವಿಡಿಯೋ ಹಿಂಬದಿ ಸವಾರನ ಮೊಬೈಲ್ನಲ್ಲಿ ಸೆರೆಯಾಗಿದ್ದು. ಎಕ್ಸ್ ನಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಇವರ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.