ಕೋಲಾರ : ಕೋಲಾರದ ಮಾಲೂರು ತಾಲೂಕಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲದ ಹುಂಡಿ ಎಣಿಕಾ ಕಾರ್ಯ ಮುಕ್ತಾಯವಾಗಿದೆ.
ದೇಗುಲದ ಅನ್ನ ದಾಸೋಹ ಆವರಣದಲ್ಲಿ ನಡೆದ ಹುಂಡಿ ಎಣಿಕಾ ಕಾರ್ಯದಲ್ಲಿ 37 ಲಕ್ಷ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದ್ದು, 18 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಹಾಗೂ ವಿದೇಶಿ ನೋಟುಗಳು ಪತ್ತೆಯಾಗಿವೆ.
ಹುಂಡಿ ಎಣಿಕಾ ಕಾರ್ಯದಲ್ಲಿ ಮಜರಾಯಿ, ಕಂದಾಯ ಇಲಾಖೆ ಅಧಿಕಾರಿಗಳು, ದೇಗುಲದ ಸಿಬ್ಬಂದಿಗಳು ಭಾಗಿಯಾಗಿದ್ದರು.

ವಿಶೇಷ ಎಂಬಂತೆ ಹುಂಡಿಯಲ್ಲಿ ಭಕ್ತರ ಕೋರಿಕೆಯ ಪತ್ರವೊಂದು ಪತ್ತೆಯಾಗಿದೆ. ದೇವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ʼದಯವಿಟ್ಟು ನಾನು ವೈದ್ಯನಾಗಬೇಕು, ನಾನು ಕಾಲೇಜು ಮುಗಿಸಿದ್ದೇನೆ, ದಯವಿಟ್ಟು ಎಂ.ಬಿ.ಬಿ.ಎಸ್ ಸೀಟು ನೀಡಿ ನನ್ನನ್ನು ವೈದ್ಯನನ್ನಾಗಿ ಮಾಡಿ. ದೇವರೇ, ದಯವಿಟ್ಟು ನನ್ನ ಗುರಿಗಳತ್ತ ಗಮನ ಹರಿಸುತ್ತೇನೆ” ಎಂದು ಭಕ್ತ ವಿದ್ಯಾರ್ಥಿಯೊಬ್ಬ ಪತ್ರದ ಮೂಲಕ ದೇವರಿಗೆ ಮನವಿ ಮಾಡಿದ್ದಾರೆ.