ಬೆಂಗಳೂರು: ದೇಶದಾದ್ಯಂತ ಮತ್ತೆ ಕೊರೊನಾ ಹಾವಳಿ ಆರಂಭವಾಗಿದ್ದು, ಎಲ್ಲ ಆಸ್ಪತ್ರೆಗಳು ಚಿಕಿತ್ಸೆಗೆ ತಯಾರಿ ನಡೆಸುತ್ತಿವೆ.

ರಾಜಧಾನಿಯಲ್ಲಿ ಕೋವಿಡ್ ಕೇಸ್ಗಳು ದಾಖಲಾಗುತ್ತಿವೆ. ಗರ್ಭಿಣಿಯರು, ಮಕ್ಕಳು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹಾಗೂ ವೃದ್ಧರು ಕೊಂಚ ಎಚ್ಚರವಹಿಸಬೇಕಾಗಿದೆ. ಸ್ವಯಂ ಪ್ರೇರಿತವಾಗಿ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾಗಿದೆ.

ಕೊರೊನಾ ಸೋಂಕಿನ ಮಧ್ಯೆ ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ಗಳನ್ನು ಆರಂಭಿಸಲಾಗುತ್ತಿದೆ. ಶೀತ, ಕೆಮ್ಮು, ಜ್ವರ, ಮೈಕೈ ನೋವು ಇರುವವರಿಗೆ ಫೀವರ್ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ನೀಡಲು ಮುಂದಾಗಿವೆ.