ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಅರೆಸ್ಟ್ ಆಗಿರುವ ಜಾನಿ ಮಾಸ್ಟರ್ ಅರೆಸ್ಟ್ ಆಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಿಮಾಂಡ್ ರಿಪೋರ್ಟ್ನಲ್ಲಿ ಜಾನಿ ಮಾಸ್ಟರ್ ತಪ್ಪೊಪ್ಪಿಕೊಂಡಿರುವುದಾಗಿ ಹಾಗೂ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾಗಿ ಉಲ್ಲೇಖಿಸಲಾಗಿದೆ.
ಜಾನಿ ಮಾಸ್ಟರ್ ತಮ್ಮ ಜೂನಿಯರ್ ಕೊರಿಯೋಗ್ರಾಫರ್ ರನ್ನು 2020ರಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು. ಆಗ ಆ ಬಾಲಕಿಗೆ 16 ವರ್ಷ. ನಾಲ್ಕು ವರ್ಷದಲ್ಲಿ ಆ ಹುಡುಗಿಗೆ ಜಾನಿ ಮಾಸ್ಟರ್ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಜಾನಿ ಮಾಸ್ಟರ್ ಪತ್ನಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದರು ಎನ್ನುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಯಾರಿಗಾದರೂ ಬಾಯಿ ಬಿಟ್ಟರೆ ಕರಿಯರ್ ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಸಂತ್ರಸ್ತೆ ಸಾಕಷ್ಟು ಹೆದರಿದ್ದರು. ಯುವತಿಗೆ ಕೆಲವು ಸಿನಿಮಾ ಆಫರ್ ಗಳನ್ನು ಕೂಡ ಜಾನಿ ತಪ್ಪಿಸಿದ್ದರು.