ಕೊಪ್ಪಳ: ಕೊಪ್ಪಳಕ್ಕೆ ಅ.6 ರಂದು 1555 ಕೋಟಿ ಯೋಜನೆಯ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರಲಿದ್ದು, ಬೃಹತ್ ಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ,ಈಗಾಗಲೇ ಕೊಪ್ಪಳದಲ್ಲಿ ಮಂಜೂರು ಆಗಿರುವ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದು,ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಪಕ್ಷದ ಮುಖಂಡರೊಂದಿಗೆ ಈಗಾಗಲೇ ಸಭೆ ಮಾಡಿದ್ದೇವೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಹಾವಳಿ ಸಮೀಕ್ಷೆಗೆ ಸಿಎಂ ಬರುವ ಕುರಿತು ಮಾತನಾಡಿ, ನಾಳೆ ಸಿಎಂ ಕಲಬುರಗಿ ಪ್ರವಾಸವನ್ನು ಕೈಗೊಳ್ಳಲಿದ್ದು, ನಾನು ಸಹ ಅಲ್ಲಿಗೆ ಹೋಗಲಿದ್ದೇನೆ. ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಂದ ರೈತರಿಗೆ ಅಂತಹ ಯಾವುದೆ ಅನಾಹುತಗಳು ಆಗಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮೀಕ್ಷಗೆ ಮಾಹಿತಿ ಕೊಡುವುದಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇವರು ವಿರೋಧ ಮಾಡುವುದು ನೋಡಿದರೆ, ಇವರಿಗೆ ಹಿಂದುಳಿದವರು, ದಲಿತರ ಬಗ್ಗೆ ಕಾಳಜೀ ಇಲ್ಲ ಅನ್ನಿಸುತ್ತದೆ. ಜೋಷಿ ಅವರ ಮನಸ್ಥಿತಿ ರಾಜ್ಯದ ಜನರಿಗೆ ಅರ್ಥ ಆಗುತ್ತದೆ. ಬಡವರ ಉದ್ದಾರ ಅವರಿಗೆ ಬೇಕಿಲ್ಲ. ಹಿಂದುಳಿದ ವರ್ಗದ ಜನರ ಬಗ್ಗೆ ಅವೆರಿಗೆ ಕಾಳಜಿ ಇಲ್ಲ. ಬಿಜೆಪಿಗರು ಹಿಂದುಳಿದ ವರ್ಗಗಳ ವಿರೋಧಿಗಳು ಎಂದಿದ್ದಾರೆ.
ಸಂಪುಟ ಪುನರ್ ರಚನೆ ಕುರಿತು ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದನ್ನು ಹೇಳುವಷ್ಟು ದೊಡ್ಡವನು ನಾನಲ್ಲ, ಜಮೀರ್ ಅಹಮ್ಮದ್ ಅವರು ಸಿಎಂ ಅವರಿಗೆ ಆಪ್ತರು. ಹೈಕಮಾಂಡ್ ಗೂ ಆಪ್ತರಾಗಿದ್ದಾರೆ. ಅವರಿಗೆ ಮಾಹಿತಿ ಇರಬಹುದು. ಈಗಾಗಲೇ ರಾಜ್ಯದಲ್ಲಿ 2727800 ಮನೆಗಳ ಸಮೀಕ್ಷೆ ಆಗಿದ್ದು, ಜಿಲ್ಲೆಯಲ್ಲಿ 133000 ಕುಟುಂಬಗಳು ಸಮೀಕ್ಷೆಯಲ್ಲಿ ಒಳಗೊಂಡಿದ್ದಾರೆ. ಶೇ.33 ರಷ್ಟು ಸಮೀಕ್ಷೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.