ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾವಣೆ ಆಗುತ್ತೆ ಅಂತಾ ಹೇಳಿದ್ದಾರೆ. ಇಂತಹುದ್ದೇ ಬದಲಾವಣೆ ಅಂತಾ ಹೇಳಿಲ್ಲ. ಸಣ್ಣಪುಟ್ಟ ಬದಲಾವಣೆ ಆಗುತ್ತೆ ಅಂತಾ ಹೇಳಿದ್ದಾರೆ ಅಷ್ಟೇ. ಅದನ್ನು ನೀವು ಹೇಗೆ ಬೇಕೋ? ಹಾಗೆ ಬರೆದುಕೊಂಡರೆ ಹೇಗೆ? ಐ ಆಮ್ ನಾಟ್ ಎ ಜರ್ನಲಿಸ್ಟ್ ಎಂದಿದ್ದಾರೆ.
ಸುರ್ಜೇವಾಲಾ ಬೆಂಗಳೂರಿಗೆ ಬರುತ್ತಿರುವುದು ಹೌದು. ಹಾಗಂತ ಪಕ್ಷದಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಬರುತ್ತಿದ್ದಾರೆ ಅಂದ್ರೆ ಹೇಗೆ? ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇದೆ ಅಂತಾ ನಿಮಗೆ ಯಾರು ಹೇಳಿದ್ದು? ಎಂದು ಸಿಎಂ ಗರಂ ಆಗಿದ್ದಾರೆ.
ಮಲೈ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವಿನ ವಿಚಾರವಾಗಿ ಮಾತನಾಡಿದ ಅವರು, ಘಟನೆ ಸಂಬಂಧ ತನಿಖೆಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ತಕ್ಕ ಕ್ರಮ ಆಗುತ್ತದೆ ಎಂದಿದ್ದಾರೆ.