ಮಾಗಡಿ/ಬೆಂಗಳೂರು : ಶೌಚಗುಂಡಿ ಸ್ವಚ್ಛತೆಗೆ ಮೂವರು ಪೌರ ಕಾರ್ಮಿಕರ ಬಳಕೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಕನ್ನಡ ಮಾಗಡಿ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೂವರು ಪೌರ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚಗೊಳಿಸಿರುವ ಘಟನೆ ವಾರದ ಹಿಂದೆ ನಡೆದಿದ್ದು, ಸದ್ಯ ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಐವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಬೀಚನಹಳ್ಳಿ ಗ್ರಾಮದ ಮನೆ ಮಾಲೀಕ ಶ್ರೀನಿವಾಸ್, ಪತ್ನಿ ವಿಜಯಲಕ್ಷ್ಮಿ, ಪುತ್ರರಾದ ಪ್ರದೀಪ್, ಕೃಷ್ಣಮೂರ್ತಿ ಹಾಗೂ ವಿಜಯ್ ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಲ ಹೊರತೆಗೆಯುವ ಯಂತ್ರದ ಬದಲು ಪೌರ ಕಾರ್ಮಿಕರಾದ ಯೋಗೇಶ್, ಪ್ರವೀಣ್, ನರಸಿಂಹಮೂರ್ತಿ ಎಂಬವರಿಂದ ಶೌಚಗುಂಡಿ ಸ್ವಚ್ಛಗೊಳಿಸಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರು ಹಿನ್ನೆಲೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ