ಚಿತ್ತಾರ’ ಮಾಸ ಪತ್ರಿಕೆ ವತಿಯಿಂದ ‘ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್‌ನ ಗಣ್ಯರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಂಡಿದ್ದರು.

ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರಲ್ಲಿ 35ಕ್ಕೂ ಹೆಚ್ಚು ವಿಭಾಗಗಳಲ್ಲಿ, ಇನ್ನೂರಕ್ಕೂ ಹೆಚ್ಚು ಪ್ರತಿಭೆಗಳು ನಾಮನಿರ್ದೇಶನಗೊಂಡಿದ್ದು, ವೆಬ್‌ಸೈಟ್ ಮತ್ತು ವಾಟ್ಸ್ಆಪ್ ಮೂಲಕ ವೋಟಿಂಗ್ ಮಾಡುವ ಪ್ರಕ್ರಿಯೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 20,49,423 ಸಿನಿ ಪ್ರೇಮಿಗಳು ವೋಟ್ ಮಾಡಿದ್ದು, ಒಟ್ಟು 35ಕ್ಕೂ ಹೆಚ್ಚು ವಿಭಾಗಳಲ್ಲಿ ಲಕ್ಷಕ್ಕೂ ಹೆಚ್ಚು ವೋಟಿಂಗ್ ನಡೆದಿದೆ.

ಪ್ರತೀ ವಿಭಾಗದಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು, ಪಬ್ಲಿಕ್ ವೋಟಿಂಗ್‌ನ್ನು ಆಧಾರವಾಗಿಟ್ಟುಕೊಂಡು ‘ಆಯ್ಕೆ ಸಮಿತಿ’ ಸದಸ್ಯರು ಅಸಲಿ ಪ್ರತಿಭೆಗಳಿಗೆ ನ್ಯಾಯ ಸಲ್ಲಿಸಲಿದ್ದಾರೆ. ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ಪ್ರಶಸ್ತಿಗೆ ಹಲವರು ಭಾಗಿಯಾಗಿದ್ದಾರೆ.
