ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್ಗೂ ಮುನ್ನ ಈ ಸುದ್ದಿ ನೀಡಿದ್ದಾರೆ. ಚಿರಂಜೀವಿ ಕೈಯಲ್ಲಿ ಒಂದೇ ಸಿನಿಮಾ ಅಲ್ಲ. ಬೇರೆ ಬೇರೆ ಬಿಗ್ ಪ್ರಾಜೆಕ್ಟ್ ಗಳು ಕೂಡ ಚಿರಂಜೀವಿ ಕೈಯಲ್ಲಿವೆ ಎಂದು ರಾಮ್ ಚರಣ್ ತಿಳಿಸಿದ್ದಾರೆ.
ವಿಶ್ವ ಅಪ್ಪಂದಿರ (ಜೂನ್ 16) ಪ್ರಯುಕ್ತ ಚಿರಂಜೀವಿ ಅವರ ಸಂದರ್ಶನವನ್ನು ಪುತ್ರ ರಾಮ್ ಚರಣ್ (Ram Charan) ಮಾಡಿದ್ದಾರೆ. ಚಿರಂಜೀವಿ 4 ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ರಾಮ್ ಚರಣ್ ಹೇಳಿದ್ದಾರೆ.
ನಾನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ತಂದೆ, 4 ಸಿನಿಮಾ ಮಾಡುತ್ತಿದ್ದಾರೆ ಎಂಬುವುದನ್ನು ರಿವೀಲ್ ಮಾಡಿದ್ದಾರೆ. ಆದರೆ, ಚಿತ್ರಗಳಿಗೆ ಯಾರ ನಿರ್ದೇಶನ, ಟೈಟಲ್ ಏನು ಎಂಬುದರ ಬಗ್ಗೆ ರಾಮ್ ಚರಣ್ ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಆ ಕುರಿತು ಇನ್ನಷ್ಟೇ ಅಪ್ಡೇಟ್ ಸಿಗಬೇಕಿದೆ.
ಅಂದಹಾಗೆ, ಮೆಗಾಸ್ಟಾರ್ ಚಿರಂಜೀವಿ ನಟನೆಯಲ್ಲಿ ‘ವಿಶ್ವಂಭರ’ ಸಿನಿಮಾದ ಕೆಲಸ ನಡೆಯುತ್ತಿದೆ. ಈ ಚಿತ್ರದಲ್ಲಿ ಬಹುಭಾಷಾ ನಟಿ ತ್ರಿಷಾ ಹಾಗೂ ಕನ್ನಡದ ನಟಿ ಆಶಿಕಾ ರಂಗನಾಥ್ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
