ನಿರ್ದೇಶಕರೊಬ್ಬರಿಗೆ ದುಬಾರಿ ಗಿಫ್ಟ್ ನೀಡುವ ಮೂಲಕ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ದೊಡ್ಡ ಸುದ್ದಿಯಾಗಿದ್ದಾರೆ.
ಹೌದು, ತೆಲುಗು ಸಿನಿಮಾ ನಿರ್ದೇಶಕ ಕೆ.ಎಸ್. ರವೀಂದ್ರ ಅಲಿಯಾಸ್ ಬಾಬಿಯವರೆಗೆ ನಟ ಚಿರಂಜೀವಿ ದುಬಾರಿ ಬೆಲೆ ಬಾಳುವ ಕೈಗಡಿಯಾರ ನೀಡಿದ್ದಾರೆ. ಬಹುಕಾಲದಿಂದ ಚಿರಂಜೀವಿಯವರ ಅಭಿಮಾನಿಯಾಗಿ, ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದವರು ಬಾಬಿ. 2023ರಲ್ಲಿ ತೆರೆಗೆ ಬಂದ ಚಿರಂಜೀವಿ ಅಭಿನಯದ ವಾಲ್ಟರ್ ವೀರಯ್ಯ ಚಿತ್ರವನ್ನು ಇದೇ ಬಾಬಿ ನಿರ್ದೇಶಿಸಿದ್ದರು.
ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈ ವಿಶ್ವಾಸದಲ್ಲೇ ನಿರ್ದೇಶಕರನ್ನು ಮನೆಗೆ ಆಹ್ವಾನಿಸಿದ್ದ ಮೆಗಾ ಸ್ಟಾರ್, ಓಮೆಗಾ ಸೀಮಾಸ್ಟಾರ್ ವಾಚ್ ಕೊಡುಗೆ ನೀಡಿದ್ದಾರೆ. 6 ರಿಂದ 10 ಲಕ್ಷ ಮೌಲ್ಯದ ಈ ಒಮೆಗಾ ಸರಣಿ ವಾಚ್ ಪಡೆದ ನಿರ್ದೇಶಕರು ಭಾವುಕರಾಗಿದ್ದಾರೆ.