ಚನ್ನಪಟ್ಟಣ(Channapatna) ಉಪ ಚುನಾವಣೆ (By-election)ಯ ಕಾವು ರಾಜ್ಯದಲ್ಲಿ ಜೋರಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೀಸ್ವರ್ (CP Yogeshwara) ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ.
ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ(Candidate) ಎಂದು ಈಗಾಗಲೇ ಹೇಳಿದ್ದಾರೆ. ಎಚ್ಡಿಕೆ(HD Kumaraswamy) ನನಗೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ. ಕಳೆದ ವಾರ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್ನವರು(Congress) ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಇನ್ನೂ ಚನ್ನಪಟ್ಟಣದಲ್ಲಿ ಸಿಪಿವೈಗೆ ಡಿ.ಕೆ. ಶಿವಕುಮಾರ್ (DK Shivakumar) ಎದುರಾಳಿಯಾಗುವ ಸಾಧ್ಯತೆ ಇದೆ.