ಬೆಂಗಳೂರು: ಈಗಾಗಲೇ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಕೆಇಎ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ವಿದ್ಯಾರ್ಥಿಗಳು ಮಾತ್ರ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ.
ಕೆಇಎ ಎಷ್ಟೇ ಕಟ್ಟುನಿಟ್ಟಿನ ರೂಲ್ಸ್ ಬ್ರೇಕ್ ಮಾಡಿದರೂ ವಿದ್ಯಾರ್ಥಿಗಳು ಮಾತ್ರ ಅದೇ ರಾಗ ಅದೇ ಹಾಡು ಎನ್ನುತ್ತಿದ್ದಾರೆ. ನಿನ್ನೆ ನಡೆದ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಸಾಕಷ್ಟು ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಫುಲ್ ತೋಳು ಶರ್ಟ್ ಧರಿಸಿ ಮೊಬೈಲ್, ವಾಚ್, ಉಂಗುರ ಧರಿಸಿ ಹಲವಾರು ವಿದ್ಯಾರ್ಥಿಗಳು ಬಂದಿದ್ದಾರೆ.
ಹೀಗಾಗಿ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಪರೀಕ್ಷೆ ಹಾಲ್ ಗೆ ಕಳುಹಿಸುವುದೇ ಕೆಇಎ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿತ್ತು. ಹೊರಭಾಗ ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ಮಂಗಳವಾರ ನಡೆದಿತ್ತು.