ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಮೂರು ದಿನಗಳ ಕಾಲ ಸಿಇಟಿ (CET) ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಕ್ಯೂ ಆರ್ ಸ್ಕ್ಯಾನ್ (QR Scan) ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿದೆ. ಅಲ್ಲದೇ, ಡ್ರೆಸ್ ಕೋಡ್ ಕೂಡ ಬಿಡುಗಡೆ ಮಾಡಿದೆ.
ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಗೆ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕ್ರಮಕ್ಕೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿದ ನಂತರವೇ ವಿದ್ಯಾರ್ಥಿಗಳನ್ನು ಎಕ್ಸಾಂ ಹಾಲ್ಗೆ ಕಳುಹಿಸಲಾಗುವುದು.
ಸಿಇಟಿ ಪರೀಕ್ಷೆಯಿಂದ ಹಿಡಿದು ದಾಖಲಾತಿಯಾಗುವವರೆಗೂ ಕೆಇಎ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಇರಲಿದ್ದು, ಸೀಟ್ ಬ್ಲಾಕ್ ಸೇರಿದಂತೆ ಹಲವಾರು ಅಕ್ರಮ ತಡೆಯಲು ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಏನಿದು ಕ್ಯೂಆರ್ ಸ್ಕ್ಯಾನ್?
ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕ್ಯೂಆರ್ ಸ್ಕ್ಯಾನ್ ತಪಾಸಣೆ
ಪ್ರತಿ ಕೇಂದ್ರದ ಮುಖ್ಯಸ್ಥರಿಗೆ ಕ್ಯೂಆರ್ ಸ್ಕ್ಯಾನ್ ಮಾಡಲು ಆಪ್ ವ್ಯವಸ್ಥೆ
ಕ್ಯೂಆರ್ ಸ್ಕ್ಯಾನ್ನಲ್ಲಿ ಮೊದಲೇ ವಿದ್ಯಾರ್ಥಿ ಮಾಹಿತಿಯನ್ನು ಕೆಇಎ ಅಪ್ಲೋಡ್ ಮಾಡಿರುತ್ತದೆ
ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದರೆ ಇದರಿಂದ ಪತ್ತೆ ಹಚ್ಚಬಹುದು
ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಸ್ಕ್ಯಾನ್ ಮೂಲಕ ನೈಜತೆ ಪರಿಶೀಲನೆ
ಬೇರೆಯವರ ಪರೀಕ್ಷೆ ತಡೆಯುವುದು
ಈ ಮೂಲಕ ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ