ಬೆಂಗಳೂರು: ಕೇಂದ್ರ ಸರ್ಕಾರದ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಸಂಸ್ಥೆಯಲ್ಲಿ ಖಾಲಿ ಇರುವ 60 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮಾಸ್ಟರ್ ರೀಲರ್ಸ್, ತಂತ್ರಜ್ಞರು, ನೇಕಾರರು, ಡೈಯರ್ಸ್ ಹುದ್ದೆಗಳು ಖಾಲಿ ಇದ್ದು, ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಅಭ್ಯರ್ಥಿಗಳನ್ನು 2025ರ ಜೂನ್ ತಿಂಗಳಿಂದ 2026ರ ಮಾರ್ಚ್ ವರೆಗೆ 10 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದ ಚಿಕ್ಕಬಳ್ಳಾಪುರ, ಧಾರವಾಡ, ರಾಮನಗರದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಜೂನ್ 30ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳ
ಸ್ಥಳ: ಚಿಕ್ಕಬಳ್ಳಾಪುರ
ವಿಳಾಸ: ಸಿಲ್ಕ್ ಟೆಕ್ನಿಕಲ್ ಸರ್ವೀಸ್ ಸೆಂಟರ್, 562105
ಸಮಯ: ಬೆಳಗ್ಗೆ 11 ಗಂಟೆಯಿಂದ ಆರಂಭ
ಧಾರವಾಡದಲ್ಲಿಯೂ ಸಂದರ್ಶನ ನಡೆಯಲಿದೆ. ಧಾರವಾಡದ ಸಿಲ್ಕ್ ಟೆಕ್ನಿಕಲ್ ಸರ್ವೀಸ್ ಸೆಂಟರ್, ಸಿಎಸ್ಟಿಆರ್ಐ, ಸೆಂಟ್ರಲ್ ಸಿಲ್ಕ್ ಬೋರ್ಡ್, ಸಿಲ್ಕ್ ಪಾರ್ಟ್, ಮೊದಲ ಮಹಡಿ, ಸಿರಿಕಲ್ಚರ್ ಕಾಂಪ್ಲೆಕ್ಸ್, ಪಿಜಿ ರಸ್ತೆ, ರಾಯಪುರದಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ, ಊಟ ಭತ್ಯೆ, ಇತರೆ ಭತ್ಯೆ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಂದರ್ಶನಕ್ಕೆ ಹಾಜರಾಗುವವರು ಗುರುತಿನ ಚೀಟಿ ಮತ್ತು ವಿಳಾಸ ಆಧಾರ ಸರ್ಟಿಫಿಕೇಟ್, ರೇಷನ್ ಕಾರ್ಡ್, ಆಧಾರ್, ಸ್ಕೂಲ್ ಸರ್ಟಿಫಿಕೇಟ್ಗಳು, ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು, ಕಾರ್ಯಾನುಭವದ ದಾಖಲೆಗಳು ಹಾಗೂ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ತೆಗೆದುಕೊಂಡು ಬರಬೇಕು ಎಂದು ಸೂಚಿಸಲಾಗಿದೆ.