ಪ್ರಯಾಣದ ವೇಳೆ ಸಾರಿಗೆ ಬಸ್ ನಿರ್ವಾಹನ ಹುಟ್ಟು ಹಬ್ಬವನ್ನು ಮಹಿಳಾ ಪ್ರಯಾಣಿಕರು ಆಚರಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ. ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಹುಟ್ಟು ಹಬ್ಬ ಆಚರಿಸಿದ್ದಾರೆ.
ಹೀಗಾಗಿ ಚಾಲಕನ ಗಮನ ಕೂಡ ಆ ಕಡೆಯೇ ಇದೆ. ಹೀಗಾಗಿ ಸಹ ಪ್ರಯಾಣಿಕರು ಗಮನಕೊಟ್ಟು ಬಸ್ ಚಲಾಯಿಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಕೈಯಲ್ಲಿ ಜೀವ ಹಿಡಿದುಕೊಂಡು ಸಹ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮಾರ್ಗವಾಗಿ ಹೆಚ್ ಡಿ ಕೋಟೆಗೆ ತೆರಳುತ್ತಿದ್ದ KA 09 F 5074 ಸಂಖ್ಯೆಯ ಬಸ್ ನಲ್ಲಿ ಈ ಘಟನೆ ನಡೆದಿದೆ. ಚಾಲಕ, ನಿರ್ವಾಹಕರ ಈ ವರ್ತನೆಗೆ ಈಗ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.