ಬೆಂಗಳೂರು: ಕೇಂದ್ರೀಯ ತನಿಖಾ ಸಂಸ್ಥೆಯಲ್ಲಿ (CBI) ಖಾಲಿ ಇರುವ 30 ಇಂಟರ್ನ್ ಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಂಟರ್ನ್ ಶಿಪ್ ವೇಳೆ ಮಾಸಿಕ ಸ್ಟೈಪೆಂಡ್ ಇರುವುದಿಲ್ಲ. ಆದರೆ, ಕಲಿಕೆಗೆ ಹಲವು ಅವಕಾಶಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೇ 15ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು https://cbi.gov.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐದು ವರ್ಷ ಹಾಗೂ ಮೂರು ವರ್ಷದ ಎಲ್ ಎಲ್ ಬಿ ಕೋರ್ಸ್ ಮುಗಿಸಿರಬೇಕು.
ಬೆಂಗಳೂರು, ಕೋಲ್ಕತ್ತ, ಚೆನ್ನೈ, ಲಖನೌ, ಮುಂಬೈನಲ್ಲಿರುವ ಸಿಬಿಐ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಇಂಟರ್ನ್ ಶಿಪ್ ವೇಳೆ ಕೊರ್ಟ್ ತೀರ್ಪುಗಳ ಅಧ್ಯಯನ, ಸಾಕ್ಷ್ಯಗಳ ಪರಿಶೀಲನೆ, ಕೋರ್ಟ್ ಪ್ರಕ್ರಿಯೆ, ಸಾಕ್ಷ್ಯಗಳನ್ನು ಹಾಜರುಪಡಿಸುವುದು, ಡೇಟಾ ಸಂಗ್ರಹ ಸೇರಿ ಹಲವು ಪ್ರಾಯೋಗಿಕ ಕೆಲಸಗಳನ್ನು ಕಲಿಯಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
- https://cbi.gov.in/ ವೆಬ್ ಸೈಟ್ ಗೆ ಭೇಟಿ ನೀಡಿ
- ಇಂಟರ್ನ್ ಹುದ್ದೆಗಳ ಅಧಿಸೂಚನೆ ತೆರೆಯಿರಿ ಮತ್ತು ಅರ್ಹತೆ ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅರ್ಜಿ ನಮೂನೆಯ ಸಂಖ್ಯೆ, ಕೊರಿಯರ್ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿಡಬೇಕು.