ಬೆಂಗಳೂರು: ಕ್ಯಾಬ್ ಚಾಲಕನೋರ್ವ ಪ್ರಯಾಣಿಕರನ್ನು ಅವಾಚ್ಯವಾಗಿ ನಿಂದಿಸಿರುವ ಘಟನೆಯೊಂದು ವೈರಲ್ ಆಗಿದೆ.
ಎರಡೆರೆಡು ಬುಕ್ಕಿಂಗ್ ಮಾಡಿದ್ದಾರೆಂದು ಆರೋಪಿಸಿ ಕ್ಯಾಬ್ ಚಾಲಕ ನಿಂದಿಸಿದ್ದಾನೆ. ನಿನ್ನೆ ಸಂಜೆ ಮೈಸೂರು ಬ್ಯಾಂಕ್ ಸರ್ಕಲ್ ಹತ್ತಿರ ಈ ಘಟನೆ ನಡೆದಿದೆ. ಇದು ನನ್ನೂರು..ನಿಮ್ಮಂತೋರ ಸೊಕ್ಕು ಇಳಿಸಲು ಡ್ರೈವರ್ ಗಳು ಬದಲಾಗಬೇಕು ಎಂದು ಬಾಯಿಗೆ ಬಂದಂತೆ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ.
ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೂ ನಾಲ್ಕು ಕಿ.ಮೀನಿಂದ ಬಂದಿದ್ದೇನೆಂದು ಹಣ ಪೀಕಿದ್ದಾನೆ ಎನ್ನಲಾಗಿದೆ. ಮತ್ತೋರ್ವ ಚಾಲಕ ಸಮಾಧಾನ ಮಾಡಿದರೂ ಕ್ಯಾಬ್ ಚಾಲಕ ಮಾತ್ರ ಕೇಳಿಲ್ಲ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.