ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾದ ಯಶಸ್ಸಿನ ನಂತರ ವಿದೇಶಗಳಲ್ಲಿ ಕೂಡ ಫೇಮಸ್ ಆಗಿದ್ದಾರೆ. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಅಭಿಮಾನಿಗಳು ಕೂಡ ಯಶ್ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೊಂದು ಕಡೆ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಯಶ್ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಸಿಕ್ಕಿದೆ.
ಈ ಚಿತ್ರ ಮುಂದಿನ ವರ್ಷ ಮಾರ್ಚ್ನಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದ ಶೂಟ್ನಲ್ಲಿ ಯಶ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅವರು ಬಹುತೇಕ ಸಮಯವನ್ನು ಮುಂಬೈನಲ್ಲೇ ಕಳೆಯಲಿದ್ದಾರೆ ಎಂದು ವರದಿ ಆಗಿದೆ.
ರಣಬೀರ್ ಕಪೂರ್ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ಹಾಗೂ ‘ರಾಮಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು, ‘ರಾಮಾಯಣ’ ಚಿತ್ರದ ಡೇಟ್ಸ್ನ ಮ್ಯಾನೇಜ್ ಮಾಡಬೇಕಿದೆ. ಸೀತೆ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಹೆಚ್ಚಿನ ಗಮನ ‘ರಾಮಾಯಣ’ ಸಿನಿಮಾದ ಮೇಲೆ ಇದೆ. ಈ ಮೂವರ ಡೇಟ್ಸ್ ಹೊಂದಾಣಿಕೆ ಆಗಿದ್ದು ಮೇನಿಂದ ಶೂಟ್ ಆರಂಭ ಆಗಲಿದೆ ಎನ್ನಲಾಗಿದೆ.
‘ರಾಮಾಯಣ’ ಒಟ್ಟೂ ಎರಡು ಪಾರ್ಟ್ನಲ್ಲಿ ಬರಲಿದೆ. ಮೊದಲ ಪಾರ್ಟ್ ಕೊನೆಯಲ್ಲಿ ಯಶ್ ಅವರ ಆಗಮನ ಆಗಲಿದೆ. ಈಗಾಗಲೇ ಇದರ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ. ಎರಡನೇ ಪಾರ್ಟ್ನಲ್ಲಿ ಯಶ್ ಅವರ ಪಾತ್ರ ಹೆಚ್ಚಿರಲಿದೆ. ಮೇ ತಿಂಗಳಿಂದ ಆರಂಭ ಆಗೋದು ‘ರಾಮಾಯಣ 2’ ಚಿತ್ರದ ಶೂಟ್ ಎಂದು ಹೇಳಲಾಗುತ್ತಿದೆ. ಯಶ್ ಅವರು ಆರು ತಿಂಗಳ ಕಾಲ ಬಾಲಿವುಡ್ನಲ್ಲಿ ಬ್ಯುಸಿ ಇರಲಿದ್ದಾರೆ.