ಬೆಂಗಳೂರು: ಸರ್ಕಾರವು ಇತ್ತೀಚೆಗಷ್ಟೇ ಬಸ್ ಟಿಕೆಟ್ ದರ ಏರಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಈಗ ಆಟೋ ದರ ಏರಿಸುವಂತೆ ಬೇಡಿಕೆ ಬರುತ್ತಿವೆ.
ಈಗಾಗಲೇ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ. ನಗರದಲ್ಲಿ ಒಂದು ಕಿ. ಮೀಟರ್ ಗೆ 5 ರೂ. ಹಾಗೂ ಎರಡು ಕಿ.ಮೀಟರ್ ಗೆ 10 ರೂ. ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಈಗ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಕಿ.ಮೀಟರ್ ಗೆ 30 ರೂ. ಇದೆ. 40 ರೂ. ಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ.
ದರ ಏರಿಕೆಯ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಸೋಸಿಯೇಷನ್ ಗಳ ಸಭೆ ಕರೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆ ಮುಂದೂಡಲಾಗಿತ್ತು. ಈಗ ಮತ್ತೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವಂತೆ ಆಟೋ ಚಾಲಕರು ಮನವಿ ಮಾಡುತ್ತಿದ್ದಾರೆ.