ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮುಗುಚಿ ಬಿದ್ದಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಕ್ವಾಟ್ರೆಸ್ ಬಳಿ ನಡೆದಿದೆ.
ಕೆಜಿಎಫ್ ನಿಂದ ಉದ್ಯೋಗಿಗಳನ್ನ ವೊಲ್ವೊ ಕಂಪನಿಗೆ ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿದ್ದು. ಬಸ್ ನಲ್ಲಿದ್ದ 10 ಜನರಲ್ಲಿ, ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೆಜಿಎಫ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕ್ರೇನ್ ಮೂಲಕ ಮುಗಿಚಿಬಿದ್ದ ಬಸ್ನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಬಸ್ ಡಿಕ್ಕಿಯಾದ ಪರಿಣಾಮ ಎರಡು ಬೀದಿ ದೀಪ ಕಂಬಗಳು ಮುರಿತಗೊಂಡಿವೆ. ಬೆಮಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.