ಗದಗ: ಬಸ್ ಹತ್ತುವ ವಿಚಾರವಾಗಿ ಜಗಳ ನಡೆದಿದ್ದು, ಕಂಡಕ್ಟರ್ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಗದಗ ಜಿಲ್ಲೆ ಮುಂಡರಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮುಂಡರಗಿಯಿಂದ ಹಿರೇವಡ್ಡಟ್ಟಿಗೆ ಹೊರಟ್ಟಿದ್ದ ಬಸ್ ನಲ್ಲಿ ಈ ಗಲಾಟೆ ನಡೆದಿದೆ. ಕಂಡಕ್ಟರ್ ಶರಣಪ್ಪ ಬಿದರಹಳ್ಳಿ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಕಂಡಕ್ಟರ್ ಕೈ ಕಾಲಿಗೆ ಗಂಭೀರವಾಗಿ ಗಾಯಗಳಾಗಿವೆ. ಬಸ್ ಹತ್ತಿ ಮುಂದೆಕ್ಕೆ ಬನ್ನಿ ಎಂದಿದ್ದಕ್ಕೆ ಮೂವರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ಕಂಡಕ್ಟರ್ ಮುಂಡರಗಿ ತಾಲೂಕಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.