ಬೆಂಗಳೂರು: ಆರ್ ಸಿಬಿ ಅಭಿಮಾನಿಗಳಿಗೆ ಅನಿಲ್ ಚಾಟ್ಸ್ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ.
ನಾಳೆ ಐಪಿಎಲ್ ಫೈನಲ್ ಪಂದ್ಯವು ಆರ್ ಸಿಬಿ ಹಾಗೂ ಪಂಜಾಬ್ ವಿರುದ್ಧ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಉಚಿತ ಮಸಾಲಪೂರಿ, ಪಾನಿಪುರಿ, ಭೇಲ್ ಪುರಿ ನೀಡುವುದಾಗಿ ಘೋಷಿಸಿದೆ.
RCB ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ ಆರ್ ಸಿಬಿ ಅಭಿಮಾನಿಯಾಗಿರುವ ಅನಿಲ್ ಚಾಟ್ಸ್ ಮಾಲೀಕ, ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿದ್ದಾರೆ. ಈ ಸಲ ಕಪ್ ನಮ್ದು ಒನ್ ಡೇ ಪಾನಿಪುರಿ ನಿಮ್ದು ಎಂದು ಈಗಾಗಲೇ ಬೋರ್ಡ್ ಹಾಕಿದ್ದಾರೆ. ಜೂನ್ 4 ರಂದು ಬುಧವಾರ ಸಂಜೆ 5 ಕ್ಕೆ ಫ್ರಿ ಚಾಟ್ಸ್ ವಿತರಣೆಗೆ ನಿರ್ಧರಿಸಲಾಗಿದೆ.